ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಯಲ್ಲಿ ತೊಡಗುವ ಸರ್ಜನ್ಗಳು ಮತ್ತು ನರ್ಸ್ಗಳ ಹೊರ ಉಡುಪು ಮೊದಲಿಗೆ ಶುಭ್ರತೆಯ ಸಂಕೇತವಾಗಿ ಅಪ್ಪಟ ಬಿಳಿ ಬಣ್ಣದ್ದಾಗಿರುತ್ತಿತ್ತು. ಈಗ ಅದರ ಬಣ್ಣ ಹಸಿರು ಅಥವಾ ನೀಲಿಯಾಗಿರುತ್ತದೆ.
ಇದಕ್ಕೆ ಮುಖ್ಯ ಕಾರಣವೆಂದರೆ, ಕೊಯ್ದ ದೇಹದೊಳಗಿನ ಕೆಂಪು ಬಣ್ಣವೇ ಸರ್ಜನ್ಗಳ ಕಣ್ಣನ್ನು ತುಂಬಿಕೊಂಡಿರುವಾಗ ಆಗಾಗ್ಗೆ ಅಕ್ಕ ಪಕ್ಕದಲ್ಲಿ ಹಸಿರು ಅಥವಾ ನೀಲಿ ಬಣ್ಣ ನೋಡಿದರೆ ಕಣ್ಣಿಗೆ ಮತ್ತು ಮನಸ್ಸಿಗೆ ತಂಪು ಸಿಗುತ್ತದೆ. ಇಷ್ಟೇ ಅಲ್ಲದೆ ದೇಹದೊಳಗಿನ ವಿವಿಧ ಕೆಂಪುಗಳ ಸಣ್ಣಪುಟ್ಟ ಅಂಗಾಂಗಗಳು ಹೆಚ್ಚು ಸ್ಪಷ್ಟವಾಗಿ ಬೇರೆ ಬೇರೆಯಾಗಿ ಕಾಣುತ್ತವೆ.