ವಿಜಯಪುರದ ಮಹಾನ್ ದೇಶಭಕ್ತನ ರೋಚಕ ಕಥೆ

Articles

ಭರತ ನಾಡಿನ ಪುಣ್ಯಭೂಮಿಯಲ್ಲಿ ವೀರ ಮರಣ ಹೊಂದಿದ್ದಾರೆ. ಬರೀ ಕತ್ತಿ, ಕೋವಿಗಳಿಂದ ಹೋರಾಟ ನಡೆಸುತ್ತಿದ್ದ ಅಂದಿನ ದಿನಗಳಲ್ಲಿ, ಅಂದಿನ ಬಿಜಾಪುರ ಜಿಲ್ಲೆಯಲ್ಲಿ ಮದ್ದು ಗುಂಡುಗಳನ್ನು ಖುದ್ದಾಗಿ ತಯಾರಿಸಿ, ಪಿರಂಗಿಗಳನ್ನು ಬ್ರಿಟಿಷರತ್ತ ಮುಖಮಾಡಿ ನಿಲ್ಲಿಸಿ, ಮಹಾನ್ ವೀರ ಸಾಹಸಿಗ ಎಂದೇ ಗುರುತಿಸಿಕೊಂಡಿದ್ದ ದೇಶಮುಖ ಮನೆತನದ ಜ್ಯೋತಿ ಬಸಲಿಂಗಪ್ಪ ವೀರಸಂಗಪ್ಪ ಅವರ ಹೆಜ್ಜೆ ಗುರುತುಗಳನ್ನ ಸ್ಮರಿಸೋಣ.

ಅದು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಮಯ, ಆಂಗ್ಲರ ದಬ್ಬಾಳಿಕೆ, ಭಾರತದ ವಿರೋಧ ನೀತಿಗಳು, ಬ್ರಿಟಿಷ್ ಅಧಿಕಾರಿಗಳ ಕಿರುಕುಳ, ಭಾರತೀಯ ಸಂಪ್ರದಾಯದ ಮರಿಚಿಕೆ, ಅರ್ಥವಿಲ್ಲದ ಕಾನೂನುಗಳು ಹೀಗೆ ಹಲವಾರು ಕಾರಣಗಳಿಂದ ಬ್ರಿಟಿಷರ ಆಡಳಿತದ ವಿರುದ್ಧ ದೇಶ್ಯಾದ್ಯಂತ ಆಕ್ರೋಶ ಹೆಚ್ಚಾಗಿತ್ತು. ಅಂತಹ ದಿನಗಳಲ್ಲಿ ಕರುನಾಡಿನ ಕಿತ್ತೂರು ಆಸ್ಥಾನ ರಾಣಿ ಚನ್ನಮ್ಮಳಿಂದ ಕೈ ತಪ್ಪಿ ಹೋಗಿದ್ದು ಒಂದೆಡೆಯಾದರೆ, ಇತ್ತ ಸುರಪುರದ ರಾಜಾ ವೆಂಕಟಪ್ಪ ನಾಯಕನ ಆಸ್ಥಾನವೂ ನಿಸ್ಸಹಾಯಕವಾಗಿ ದಿನಕಳೆಯುತ್ತಿತ್ತು. ಈ ಎರಡು ಆಸ್ಥಾನಗಳನ್ನು ಮತ್ತೆ ತಲೆ ಎತ್ತುವಂತೆ ಮಾಡಬೇಕೆಂದು ಕೊಟ್ನಾಳ ಕೋಟೆಯಲ್ಲಿ ರೋಷಾಗ್ನಿಯಿಂದ ಪ್ರತಿಜ್ಞೆ ಮಾಡಿ, ಸದ್ದಿಲ್ಲದೇ ಖುದ್ದು ತಾನಾಗಿಯೇ ಮದ್ದು, ಗುಂಡುಗಳನ್ನು ತಯಾರಿಸುವ ಕಾರ್ಯವನ್ನು ಭರದಿಂದ ಆರಂಭಿಸಿದ್ದರು ಬಸಲಿಂಗಪ್ಪ ದೇಶಮುಖರು.

ಜಂಬಗಿ – ಕೊಟ್ನಾಳ ಕೋಟೆಯೋಳಗೆ ಚೌಕಾಕಾರದ ಬೃಹತ್ ಗಾತ್ರದ ಕೊಠಡಿಯೊಳಗೆ ಮದ್ದು, ಗುಂಡುಗಳನ್ನು ಸೇಖರಿಸಿ ಯಾರಿಗೂ ಸುಳಿವು ನೀಡದೇ ತಮ್ಮ ಕಾರ್ಯ ಮುಂದುವರೆಸಿದ್ದರು. ಮದ್ದು ಗುಂಡುಗಳ ಅರಿವೇ ಇರದ ಅಂದಿನ ದಿನಗಳಲ್ಲಿ ಅವುಗಳನ್ನು ತಯಾರಿಸುವ ಬುದ್ಧಿ ಶಕ್ತಿ ಹೊಂದಿದ್ದ ಬಸಲಿಂಗಪ್ಪನವರ ಸಾಹಸದ ಕಥೆ ರೋಚಕವೇ ಸರಿ.

ಮದ್ದು, ಗುಂಡು

ಕೊಟ್ನಾಳ ಕೋಟೆಯಲ್ಲಿ ಅಗತ್ಯಕ್ಕೆ ಬೇಕಾದಷ್ಟು ಸ್ಪೋಟಕ ವಸ್ತುಗಳನ್ನು ತಯಾರಿಸಿಕೊಂಡು, ಸಂಸ್ಥಾನಗಳ ಅಪ್ಪಣೆಗಾಗಿ ಕಾದು ಕುಳಿತಿದ್ದರು ಬಸಲಿಂಗಪ್ಪನವರು. ಕೋಟೆಯ ಸುತ್ತಲಿನ ನಾಲ್ಕು ದಿಕ್ಕಿನಲ್ಲಿರುವ ಬುರ್ಜ್ ಗಳಲ್ಲಿ ಮದ್ದು ಗುಂಡುಗಳನ್ನು ಸೇಖರಿಸಿ ಆಂಗ್ಲರನ್ನು ಸದೆಬಡಿಯಲು ಕಾತುರತೆಯಿಂದ ಕಾದು ಕುಳಿತಿದ್ದರು. ಅದ್ಯಾವ ವಕ್ರದೃಷ್ಠಿ ದೇಶಮುಖ ಮನೆತನದ ಮೇಲೆ ಬಿದ್ದಿತೋ ತಿಳಿಯದು, ಆದರೆ ಇವರ ಸ್ಪೋಟಕ ವಸ್ತುಗಳ ಸೇಖರಣೆಯ ಬಗ್ಗೆ ಬ್ರಿಟಿಷ್ ಅಧಿಕಾರಿಗಳಿಗೆ ಮಾಹಿತಿ ತಲುಪಿತು. ಹೊಂಚು ಹಾಕಿ ಕೆಂಪು ಮೂತಿಯ ಅಧಿಕಾರಿಗಳು ವೀರ ಬಸಲಿಂಗಪ್ಪನನ್ನು ಬಂಧಿಸುತ್ತಾರೆ. ಕೊಟ್ನಾಳ ಕೋಟೆಯ ಮೇಲೆ ಆಕ್ರಮಣ ಮಾಡಿ ಸೇಖರಿಸಿಟ್ಟಿದ್ದ ಮದ್ದು ಗುಂಡುಗಳನ್ನ ವಶಕ್ಕೆ ಪಡೆದು, ಬ್ರಿಟಿಷರ ಬೇಡಿಯಲ್ಲಿ ಬಂಧಿತವಾದ ಬಸಲಿಂಗಪ್ಪರಿಗೆ ಸ್ಪೋಟಕ ವಸ್ತುಗಳ ತಯಾರಿಕೆ ಬಗ್ಗೆ ಬಾಯ್ಬಿಡುವಂತೆ ಜೈಲಿನಲ್ಲಿ ಅನೇ ರಿತಿಯಲ್ಲಿ ಚಿತ್ರಹಿಂಸೆ ನೀಡಲಾಗುತ್ತೆ, ಆಂಗ್ಲರ ಏಟಿಗೆ ಜಗ್ಗದ ವೀರ ಬಸಲಿಂಗಪ್ಪನನ್ನು ಅಪರಾಧಿ ಎಂದು ಪರಿಗಣಿಸಿ ನೇಣಿಗೆ ಏರಿಸಲಾಯಿತು ಅಂತ ಇತಿಹಾಸ ಹೇಳುತ್ತದೆ.

ಕೊಟ್ನಾಳ ಕೋಟೆಯಲ್ಲಿ

Leave a Reply